ಹುಣಸೇ ಮರ ಫಾಬೇಸಿ ಕುಟುಂಬಕ್ಕೆ ಸೇರಿದ ಮರ. ೨೦ ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಟಮರಿಂಡ್ () ಅಂತಾರೆ. ಇದರ ಸಸ್ಯಶಾಸ್ತ್ರ ಹೆಸರು ಟಮರಿಂಡಸ್ ಇಂಡಿಕಾ( ). == ಇತರ ಭಾಷೆಗಳಲ್ಲಿ ಇದರ ಹೆಸರು == ಮರಾಠಿ:ಚಿಂಚ್() ಮಲಯಾಳಂ:ಪುಲಿ() ತಮಿಳು::ಪುಲಿ() ತೆಲುಗು:ಚಿಂತ() ಬೆಂಗಾಲಿ:ಅಮ್ಲಿ() ಗುಜರಾತಿ:ಅಮ್ಲಿ() ಹಿಂದಿ:ಇಮ್ಲಿ(),ಚಿಂಚಿಪಾಲ()ತಿಂತಿದಿಕ() ಆಂಗ್ಲ:ಟಮರಿಂಡ್() ಅರಬ್ಬೀ ಭಾಷೆ ಯಲ್ಲಿ ಹುಣಸೇಯನ್ನು ಟಮರ್-ಹಿಂಡಿ(-) ಅಂತಾರೆ. ಅದೇ ಆಂಗ್ಲಭಾಷೆಯಲ್ಲಿ ಟಮರಿಂಡ್()ಆಗಿದೆ ಎಂದು ಭಾವಿಸಲಾಗಿದೆ. === ಮರ === ಹುಣಸೇ ಮರದ ಮೂಲ ಆಫ್ರಿಕಖಂಡದ ಪೂರ್ವಭಾಗದ ಉಷ್ಣಮಂಡಲ ಅರಣ್ಯಗಳ ಪ್ರಾಂತ್ಯಗಳೆಂದು ಭಾವಿಸುತ್ತಾರೆ. ಇದು ದೊಡ್ಡ ಗಾತ್ರದ ಮರ. ೨೦ ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ರೆಂಬೆ ಕೊಂಬೆಗಳನ್ನು ಹೊಂದಿದೆ. ಸತತ ಹರಿತವಾಗಿರುತ್ತದೆ. ಒತ್ತು ಕಣರಚನೆ ದಾರುವನ್ನು ಹೊಂದಿದೆ. ಎಲೆಗಳು ಚಿಕ್ಕದಾಗಿರುತ್ತವೆ. == ಹುಣಸೇ ಬೀಜ == ಹುಣಸೇ ಬೀಜ ಕಾಫಿಬಣ್ಣದಲ್ಲಿರುತ್ತದೆ. ಬೀಜದ ಮೇಲೆ ತೆಳುವಾದ ಸಿಪ್ಪೆ ಇರುತ್ತದೆ. ಸಿಪ್ಪೆಯ ಒಳಗೆ ದಟ್ಟ ಕಾಫಿ ಬಣ್ಣದ ಎರಡು ಬೀಜಗಳಿರುತ್ತವೆ. ಪರಿಮಾಣ ೧.೫ ೦.೮ ಸೆಂ.ಮೀ ಇರುತ್ತದೆ. ಒಂದು ಹುಣಸೇ ಕಾಯಿಯಲ್ಲಿ ೪-೫ ಬೀಜಗಳು ಇರುತ್ತವೆ. ಹುಣಸೇ ಹಣ್ಣನ್ನು ಅಡುಗೆಯಲ್ಲಿ ಹುಳಿಯ ರುಚಿ/ಸವಿಗಾಗಿ ಉಪಯೋಗಿಸುತ್ತಾರೆ. ಹುಣಸೆ ಬೀಜವನ್ನು ಪುಡಿಯನ್ನಾಗಿ ()ಮಾಡಿ ವಸ್ತ್ರ ಪರಿಶ್ರಮೆ/ಕಾರ್ಖಾನೆಯಲ್ಲಿ ವಸ್ತ್ರಗಳನ್ನು/ಬಟ್ಟೆಗಳನ್ನು ಸೈಜಿಂಗ್ ಮಾಡುವುದಕ್ಕೆ ವಿನಿಯೋಗಿಸುತ್ತಾರೆ. ಅಂಗೇ ಜಿಗುರು/ಬಂಕೆ(), ಅಡೆಹೆಸ್ಸಿವ್ಸು()ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ. === ಹುಣಸೇ ಬೀಜದಲ್ಲಿರುವ ಪದಾರ್ಥಗಳು === ಹುಣಸೇ ಬೀಜದಲ್ಲಿ ಈ ಕೆಳಗಿನ ಪಟ್ಟಿಯಲ್ಲಿ ಕೊಟ್ಟಿರುವ ಪದಾರ್ಥಗಳಿರುತ್ತವೆ. === ಎಣ್ಣೆಯ ಉತ್ಪತ್ತಿ === ಹುಣಸೇ ಬೀಜಗಳನ್ನು ವೊದಲು ರೋಸ್ಟರುನಲ್ಲಿ()ರೋಸ್ಟಿಂಗ್ ಮಾಡುವರು. ಹಾಗೆ ಮಾಡುವುದರಿಂದ ಹೊರಗಡೆ/ಬೀಜದ ಮೇಲೆ ಇರುವ ಸಿಪ್ಪೆ ಸಡಿಲವಾಗುತ್ತದೆ. ಆಮೇಲೆ ಬೀಜಗಳನ್ನು ಬೀಟರು () ಎನ್ನುವ ಯಂತ್ರದಲ್ಲಿ ಹಾಕಿ ಬೀಜದ ಮೇಲಿರುವ ಸಿಪ್ಪೆಯನ್ನು ಬೇರೆ ಮಾಡುತ್ತಾರೆ. ಹೀಗೆ ಸಿಪ್ಪೆ ತೆಗೆದ ಬೀಜವನ್ನು ಸೀಡ್ ಬ್ರೇಕರು( )ಯಂತ್ರದ ಸಹಾಯದಿಂದ ಸಣ್ಣ ತುಂಡುಗಳನ್ನಾಗಿ ಮಾಡಲಾಗುತ್ತದೆ. ಬೀಜದ ತುಂಡುಗಳನ್ನು ಕುಕ್ಕರ್()ಎನ್ನುವ ಯಂತ್ರದಲ್ಲಿ ಸ್ಟೀಮ್()ಸಹಾಯದಿಂದ ಬಿಸಿಮಾಡಿ, ೮೦-೮೫೦C ವರೆಗೆ ಬೇಯಿಸಿ ಫ್ಲೆಕಿಂಗ್ ಯಂತ್ರಕ್ಕೆ ಕಳುಹಿಸಲಾಗುತ್ತದೆ. ಫ್ಲೇಕಿಂಗ್ ಯಂತ್ರದಲ್ಲಿ ಫ್ಲೇಕ್ಸು ತಯಾರಾಗುತ್ತವೆ. ಫ್ಲೇಕ್ಸುನಲ್ಲಿ ೧೩-೧೪% ತೇವ ಮತ್ತು ಉಷ್ಣೋಗ್ರತೆ ೮೦೦C ತನಕ ಇರುತ್ತದೆ. ಅದಕ್ಕೆ ಫ್ಲೇಕ್ಸುಗಳನ್ನು ಕೂಲರುಗೆ ಕಳುಹಿಸಿ, ತಣ್ಣಗೆ ಮಾಡಲಾಗುತ್ತದೆ. ಆಮೇಲೆ ಫ್ಲೇಕ್ಸುಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ಗೆ ಕಳುಹಿಸಿ ಕೊಟ್ಟು, ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಸಾಲ್ವೆಂಟ್ ಪ್ಲಾಂಟ್ನಲ್ಲಿ ಹೆಕ್ಸೆನ್()ಯೆನ್ನುವ ದ್ರಾವಣವನ್ನು ಉಪಯೋಗಿಸಿ ಎಣ್ಣೆಯನ್ನು ತೆಗೆಯಲಾಗುತ್ತದೆ. === ಎಣ್ಣೆ === ಸಾಲ್ವೆಂಟ್ ಎಕ್ಸುಟ್ರಾಕ್ಷನು ವಿಧಾನದಿಂದ ತೆಗೆದ ಎಣ್ಣೆ ಕಪ್ಪುಕಂದು( )ಬಣ್ಣದಲ್ಲಿರುತ್ತದೆ.ಈ ಎಣ್ಣೆಯನ್ನು ರಿಫೈನರಿ ಮಿಲ್ಲಿನಲ್ಲಿ ಶುದ್ಧಿಮಾಡಿದಾಗ ಮಂಜಿಲ್/ಹಳದಿ ಬಣ್ಣವಾಗಿ ಕಾಣಿಸುತ್ತದೆ. ಹುಣಸೇ ಬೀಜದ ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳುಶೇಂಗಾ ಎಣ್ಣೆಯನ್ನು ಹೋಲುತ್ತದೆ. ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ ಎಣ್ಣೆಯ ಭೌತಿಕ, ರಸಾಯನಿಕ ಗುಣಗಳು === ಎಣ್ಣೆಯ ಉಪಯೋಗಗಳು === ರಿಫೈನರಿ ಮಿಲ್ಲಿನಲ್ಲಿ ಶುದ್ಧಿಮಾಡಿದ ಮೇಲೆ ಅಡಿಗೆ ಎಣ್ಣೆಯಾಗಿ ಉಪಯೋಗಿಸಬಹುದು. ಸಾಬೂನ್ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ವನಸ್ಪತಿತಯಾರಿಕೆಯಲ್ಲಿಯೂ ವಿನಿಯೋಗಿಸುತ್ತಾರೆ. ಬಣ್ಣಗಳನ್ನು ಉತ್ಪತ್ತಿ ಮಾಡುವುದರಲ್ಲಿಯೂ ಉಪಯೋಗಿಸುತ್ತಾರೆ. ವಾರ್ನಿಷು()ಗಳ ತಯಾರಿಕೆಯಲ್ಲಿಯು ಬಳಸುತ್ತಾರೆ. ದೀಪದ ಎಣ್ಣೆಯನ್ನಾಗಿ ಉಪಯೋಗಿಸಬಹುದು. === ಉಲ್ಲೇಖನ ===